ದ್ರೋಣಾಚಾರ್ಯ ಅಕಾಡೆಮಿ ಬಗ್ಗೆ

ದ್ರೋಣಾಚಾರ್ಯ ಅಕಾಡೆಮಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡುವುದರ ಮೂಲಕ ಸ್ಪರ್ಧಾರ್ಥಿಗಳಿಗೆ ಸರಿಯಾದ ಅಧ್ಯಯನ ಸಂಪನ್ಮೂಲಗಳನ್ನು ಒದಗಿಸುವ ಉದ್ದೇಶದಿಂದ ಪ್ರಾರಂಭಗೊಂಡಿದೆ.

ಸ್ಪರ್ಧಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ಉನ್ನತ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ವರ್ಗದವರು ಮತ್ತು ನುರಿತ ಉಪನ್ಯಾಸಕರ ಬಳಗವೇ ದ್ರೋಣಾಚಾರ್ಯ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದರ ಜೊತೆಜೊತೆಗೆ ಸಮರ್ಪಕ ಅಧ್ಯಯನಕ್ಕೆ ಸರಿಯಾದ ಮಾರ್ಗದರ್ಶನ ಮಾಡುತ್ತಿದ್ದಾರೆ. ರಾಜ್ಯದ ಎಲ್ಲಾ ಪ್ರಕಾಶಕರ ಪುಸ್ತಕಗಳೂ ಸಹ ದೊರೆಯುತ್ತವೆ ಹಾಗೂ ಹುಸೇನಪ್ಪ ನಾಯಕ‌ ಅಕಾಡೆಮಿ ಯೂಟ್ಯೂಬ್ ಚಾನಲ್ ಸೇರಿದಂತೆ ಹಲವಾರು ಉಪನ್ಯಾಸಕರ ಮಾರ್ಗದರ್ಶನದ‌ ಸಂಯೋಗದಲ್ಲಿ ದ್ರೋಣಾಚಾರ್ಯ ಅಕಾಡೆಮಿ ಮುಂದಿನ ಹೆಜ್ಜೆಗಳನ್ನು ಇಡುತ್ತಿದೆ.

ಉದ್ದೇಶಗಳು

  • ಸ್ಪರ್ಧಾ ಪರೀಕ್ಷೆಯ ಸ್ಪರ್ಧಾರ್ಥಿಗಳಿಗೆ ಸುಲಭವಾಗಿ ಸಮರ್ಪಕವಾದ ಅಧ್ಯಯನ ಸಂಪನ್ಮೂಲಗಳನ್ನು ಒದಗಿಸುವುದು.
  • ಅಧ್ಯಯನಕ್ಕೆ ಸಂಬಂಧಿತ ಪುಸ್ತಕಗಳು | ಕೋರ್ಸ್ | ಕ್ವಿಜ್ | ಜಾಬ್ ನೋಟಿಫಿಕೇಶನ್ ಅಪ್ ಡೇಟ್ಸ್ | ಪ್ರಚಲಿತ ಘಟನೆಗಳ ಮಾಹಿತಿ ಇತ್ಯಾದಿ ಎಲ್ಲಾ ಸ್ಪರ್ಧಾರ್ಥಿಗಳಿಗೆ ತಲುಪುವಂತೆ ವೆಬ್ ಸೈಟ್ ಕಾರ್ಯನಿರ್ವಹಿಸುವುದು.
  • ನುರಿತ ಉಪನ್ಯಾಸಕರ ಮೂಲಕ ಕ್ರಮಬದ್ಧವಾದ ಯೋಜನೆಗಳನ್ನು ಸಿದ್ದಪಡಿಸಿ ಸರಳವಾದ ಮಾರ್ಗದಲ್ಲಿ ಆನ್ ಲೈನ್ ಮೂಲಕ ಪ್ರತಿ ವಿದ್ಯಾರ್ಥಿಗೂ ತಲುಪುವಂತೆ ಮಾರ್ಗದರ್ಶನ ನೀಡಿ ಅದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಡುವುದು.
  • ಸ್ಪರ್ಧಾರ್ಥಿಗಳಿಗೆ ಸಹಾಯವಾಗುವಂತೆ ಅವರ ಅಧ್ಯಯನದ ಮಟ್ಟವನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನವೂ ಕ್ವಿಜ್ ನಡೆಸಲಾಗುವುದು. ಇದರ ಮೂಲಕ ಸ್ಪರ್ಧಾರ್ಥಿಗಳಿಗೆ ಅಧ್ಯಯನದ ಅಗತ್ಯ ಮತ್ತು ಅದಕ್ಕೆ ಬೇಕಾದ ಯೋಜನೆಯನ್ನು ರೂಪಿಸಿಕೊಳ್ಳಲು ಸಹಾಯವಾಗುವುದು.
  • ಕ್ರಮಬದ್ಧವಾದ ಆಯ್ದ ಮತ್ತು ಪರೀಕ್ಷೆಗೆ ಪೂರಕವಾದ ಪ್ರಚಲಿತ ಘಟನೆಗಳು (Current Affairs) ಪ್ರತಿದಿನವೂ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು.
  • ಅಧ್ಯಯನಕ್ಕೆ ಬೇಕಾದ ಎಲ್ಲ ಅಗತ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಆನ್ ಲೈನ್ ಮೂಲಕ ನೇರವಾಗಿ ಮನೆಗೆ ತಲುಪುವಂತೆ ಮಾಡಲಾಗುವುದು.

ಯೋಜನೆ

ಸ್ಪರ್ಧಾತ್ಮಕ ಕ್ಷೇತ್ರವು ಮುಂಚೆಗಿಂತಲೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಅದರಂತೆಯೇ ಸ್ಪರ್ಧಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ಈ ವಿಶಾಲ ಸಮುದ್ರದಲ್ಲಿ ಸರಿಯಾದ ಮಾರ್ಗದರ್ಶನವಿಲ್ಲದೆ ಸರ್ಕಾರಿ ಕೆಲಸವೆಂಬ ಮುತ್ತು ಹುಡುಕುವುದು ನಿಜಕ್ಕೂ ಸವಾಲಿನ ಕೆಲಸವೆ. ಆದರೆ ದ್ರೋಣಾಚಾರ್ಯ ಅಕಾಡೆಮಿಯು ತನ್ನ ವಿಶಿಷ್ಟ ಯೋಜನೆಗಳ ಮೂಲಕ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ. ಅದರಂತೆಯೇ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಪ್ರತಿಯೊಬ್ಬ ಸ್ಪರ್ಧಾರ್ಥಿಗೂ ತಾನು ಕುಳಿತಲ್ಲಿಯೇ ಈ ಎಲ್ಲ ಸೌಲಭ್ಯವನ್ನು ಪಡೆದುಕೊಳ್ಳಲು ಸಹಾಯವಾಗುವಂತೆ ಈ ವೆಬ್ ಸೈಟ್ ರೂಪಿಸಲಾಗಿದ್ದು ಸರಿಯಾಗಿ ಸದುಪಯೋಗ ಪಡೆದುಕೊಂಡ ಸ್ಪರ್ಧಾರ್ಥಿಗೆ ಗುರಿ ತಲುಪುವುದು ಕಠಿಣವಾಗದು. ಹೊಸ ಹೊಸ ಅಪ್ ಡೇಟ್ ಗಳೊಂದಿಗೆ ನಿರಂತರವಾಗಿ ಹೊಸತನವನ್ನು ಕಾಪಾಡಿಕೊಳ್ಳುತ್ತಲೇ ಪ್ರಾಮಾಣಿಕ ಅಭ್ಯರ್ಥಿಗೆ ಅಷ್ಟೇ ಪ್ರಾಮಾಣಿಕವಾದ ಸೌಲಭ್ಯಗಳನ್ನು ನೀಡುವ ಯೋಜನೆ ದ್ರೋಣಾಚಾರ್ಯ ಅಕಾಡೆಮಿಯದಾಗಿದೆ.

©2023 Dhronacharya, All Rights Reserved.